ನಮ್ಮ ಶಾಲೆ ಮತ್ತು ಶಾಲೆಯ ಬ್ಲಾಗ್ ಬಗ್ಗೆ ನಿಮ್ಮ ಸಲಹೆ-ಸೂಚನೆ, ಅಭಿಪ್ರಾಯ ತಿಳಿಯಲು ಕಾತರರಾಗಿದ್ದೇವೆ. ನಮ್ಮ ಶಾಲೆಯ ಇ-ಮೇಲ್ ವಿಳಾಸ : ccakpschool@gmail.com
ನಮ್ಮ ಶಾಲೆಯ Facebook I.D :

Thursday, 30 October 2014

ಆನೆ


D£É

·      D£É EzÀÄ PÁr£À°è ªÁ¹¸ÀÄvÀÛzÉ
·      D£É EzÀÄ ¸À¸ÁåºÁj ¥ÁætÂ0iÀiÁVzÀÄÝ PÀ§Äâ ªÀÄvÀÄÛ ºÀÄ®è£ÀÄß EµÀÖ¥ÀqÀÄvÀÛzÉ.
·      EzÀPÀÌ £Á®ÄÌ zÀ¥ÀàªÁzÀ PÁ®ÄUÀ½zÀÄÝ zÉÆqÀØzÁzÀ JgÀqÀÄ Q«UÀ½ªÉ.
·      aPÀÌzÁzÀ JgÀqÀÄ PÀtÄÚUÀ½zÀÄÝ GzÀݪÁzÀ ¸ÉÆAr®£ÀÄß ªÀÄvÀÄÛ VqÀتÁzÀ ¨Á®ªÀ£ÀÄß ºÉÆA¢gÀÄvÀÛzÉ. £ï
·      D£ÉUÉ GzÀݪÁzÀ JgÀqÀÄ PÉÆÃgÉ ºÀ®ÄèUÀ½ªÉ ªÀÄvÀÄÛ PÀAzÀÄ §tÚªÀ£ÀÄß ºÉÆA¢gÀÄvÀÛzÉ.

Monday, 18 August 2014

Our school students writing



LIFE
How you know what is life
How you know what is life
If you have pain of life
Then you know what is life
-         Nadeem M Momin
8th (EM)
                            

MORNING ALARM
Most difficult task
To find socks
Most dreadful journey
Way to school class
Most lovely time
Meeting friends
Most tragic moment
Surprise test in 1st period
Most wonderful news
Teacher is absent
-         Arjun N Chavan  
8th (EM) 
MATHS (long form)
M – Mental
A – Attack
T – To
H – Handsome
S – Students

For a boy its easier to pick up
40+50 k.g. girl
But the same boy
It’s quit difficult to pick up
A 14.2 kg Gas cylinder
Moral of the story
Redication and interest matter.

MOTHER
M – is for the million things she gave me
O – Only that she’s growing old
T – Tears she had to same me
H – Heart of Purest gold
E – her Eyes with love
R – Right and Right she will be always.
-         Arjun chavan
    8th (EM)

Saturday, 22 February 2014

ಮೈಸೂರಿನ ಇತಿಹಾಸ

           ೧೯೪೭ ರವರೆಗೂ ಒಡೆಯರ ವಂಶದ ಆಳ್ವಿಕೆಗೆ ಒಳಪಟ್ಟಿದ್ದ ಮೈಸೂರು ರಾಜ್ಯಕ್ಕೆ ಮೈಸೂರು ರಾಜಧಾನಿಯಾಗಿತ್ತು. ಹಿಂದೂ ಪುರಾಣಗಳ ಪ್ರಕಾರ ಮಹಿಷಾಸರ ಎಂಬ ದಾನವನಿಂದ ಈ ಸ್ಥಳಕ್ಕೆ ಮಹಿಷೂರು ಎಂಬ ಹೆಸರು ಬಂದಿತು ಹಾಗೂ ಬಳಿಕ ಅದೇ ಮೈಸೂರು ಆಯಿತು ಎಂದು ಪ್ರತೀತಿಯಿದೆ. ಮಹಿಷಾಸುರನನ್ನು ವಧಿಸಿದ ದೇವಿ ಚಾಮುಂಡೇಶ್ವರಿ ದೇವಾಲಯವು ಚಾಮುಂಡಿ ಬೆಟ್ಟದ ಮೇಲಿದೆ. ಮೈಸೂರನ್ನು ಆಳಿದ ಯದುವಂಶದ ಒಡೆಯರು ಕಲೆ ಮತ್ತು ಸಂಸ್ಕೃತಿ ಬೆಳವಣಿಗೆಗೆ ಮಹತ್ವದ ಕೊಡುಗೆಯನ್ನು ನೀಡಿರುತ್ತಾರೆ. ಇದರಿಂದಲೇ ಮೈಸೂರು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈಗಿನ ಮೈಸೂರು ನಗರವು ೧೫ನೆಯ ಶತಮಾನದವರೆಗೂ ಪುರಗೆರೆ ಎಂಬ ಹೆಸರು ಪಡೆದಿತ್ತು. ೧೬ನೇ ಶತಮಾನದಲ್ಲಿ ಮೂರನೆಯ ಚಾಮರಾಜ ಒಡೆಯರು ಮಹಿಷೂರು ಕೋಟೆಯನ್ನು ಕಟ್ಟಿಸಿ ಅದನ್ನು ತಮ್ಮ ಮಗ ನಾಲ್ಕನೆಯ ಚಾಮರಾಜ ಒಡೆಯರಿಗೆ ಬಿಟ್ಟುಕೊಟ್ಟರು. ಆಗ ಪುರಗೆರೆಯನ್ನು ಮಹಿಷೂರು ಎಂಬ ಹೆಸರಿನಿಂದ ಗುರುತಿಸಲಾಯಿತು. ವಿಜಯನಗರ ಸಾಮ್ರಾಜ್ಯದ ಸಾಮಂತರಾಗಿದ್ದ ಒಡೆಯರು ವಿಜಯನಗರ ಸಾಮ್ರಾಜ್ಯದ ಪತನದ ಬಳಿಕ ಸ್ವತಂತ್ರರಾದರು. ೧೮ನೆಯ ಶತಮಾನದಲ್ಲಿ ಅಲ್ಪ ಕಾಲದ ಹೈದರಾಲಿ ಹಾಗೂ ಟಿಪ್ಪುಸುಲ್ತಾನ್‌ಕೂಡಾ ಮೈಸೂರು ರಾಜ್ಯವನ್ನು ಆಳಿರುತ್ತಾರೆ. ಟಿಪ್ಪುಸುಲ್ತಾನನ ಪತನದ ಬಳಿಕ ಮೈಸೂರಿನಲ್ಲಿ ಒಡೆಯರ ಆಳ್ವಿಕೆಯೇ ಮುಂದುವರಿಯಿತು.

ಮೈಸೂರು ಪ್ರಾಂತ್ಯವನ್ನು ಆಳಿದ ವಿವಿಧ ರಾಜಮನೆತನಗಳು
ಮೈಸೂರು ಪ್ರಾಂತ್ಯವನ್ನು ಆಳಿದ ವಿವಿಧ ರಾಜಮನೆತನಗಳು
ಕ್ರಿಶ ೦೩೨೫ – ಕ್ರಿಶ ೯೯೯ – ತಲಕಾಡಿನ ಗಂಗರು
ಕ್ರಿಶ ೧೦೦೦ – ಕ್ರಿಶ ೧೧೦೦ – ಚೋಳರು
ಕ್ರಿಶ ೧೧೦೦ – ಕ್ರಿಶ ೧೩೪೬ – ಹೊಯ್ಸಳರು
ಕ್ರಿಶ ೧೩೩೬ – ಕ್ರಿಶ ೧೫೬೫ – ವಿಜಯನಗರದ ಅರಸರು
ಕ್ರಿಶ ೧೩೯೯ – ಕ್ರಿಶ ೧೭೬೧ – ಮೈಸೂರಿನ ಒಡೆಯರು
ಕ್ರಿಶ ೧೭೬೧ – ಕ್ರಿಶ ೧೭೯೯ – ಹೈದರಾಲಿ ಹಾಗೂ ಟಿಪ್ಪುಸುಲ್ತಾನ
ಕ್ರಿಶ ೧೮೦೦ – ಕ್ರಿಶ ೧೮೩೧ – ಮೈಸೂರಿನ ಒಡೆಯರು
ಕ್ರಿಶ ೧೮೩೧ – ಕ್ರಿಶ ೧೮೮೧ – ಬ್ರಿಟೀಷರು
ಕ್ರಿಶ ೧೮೮೧ – ಕ್ರಿಶ ೧೯೪೭ – ಮೈಸೂರಿನ ಒಡೆಯರು
ಹೀಗೆ ಮೈಸೂರು ತನ್ನದೇ ಆದ ಸುದೀರ್ಘ ಪರಂಪರೆನ್ನು ಹೊಂದಿದೆ. ಸುಮಾರು ಎರಡು ಸಾವಿರ ವರ್ಷಗಳ ಐತಿಹಾಸಿಕ ಪರಂಪರೆ, ಉದಾತ್ತ ಸಾಂಸ್ಕೃತಿಕ ಮೌಲ್ಯಗಳನ್ನು ಆಳವಾಗಿ ಮೈಗೂಡಿಸಿಕೊಂಡು ಖ್ಯಾತಿ ಪಡೆದಿದೆ. ಮೈಸೂರು ಜಿಲ್ಲೆಯಾದ್ಯಂತ ಅನೇಕ ರಾಜ ಮನೆತನಗಳು, ಸಂಸ್ಥಾನಗಳು ಜಿಲ್ಲೆಯಲ್ಲಿ ಸಾಹಿತ್ಯ, ಕಲೆ, ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಜಿಲ್ಲೆಯ ನದಿಗಳು ನೈಸರ್ಗಿಕ ಸಂಪನ್ಮೂಲವನ್ನು ಹೆಚ್ಚಿಸಿದೆ. ಜಿಲ್ಲೆಯ ಮೈಸೂರು ವಿಶ್ವವಿದ್ಯಾಲಯವು ರಾಜ್ಯಕ್ಕಲ್ಲದೇ ರಾಷ್ಟ್ರಕ್ಕೆ ಸಾಹಿತಿಗಳು, ಲೇಖಕರು, ವಿಜ್ಞಾನಿಗಳು, ಕವಿಗಳು ಮೊದಲಾದ ಪ್ರಮುಖರನ್ನು ನೀಡಿದೆ. ಮೈಸೂರಿನ ದಸರಾ ವಿಜಯದಶಮಿಯ ಮೆರವಣಿಗೆ ವಿಶ್ವವಿಖ್ಯಾತವಾದದ್ದು.

ಜಿಲ್ಲೆಯ ಭೌಗೋಳಕ ಹಿನ್ನೆಲೆ

ದಖ್ಖನ್‌ಪ್ರಸ್ಥಭೂಮಿಯ ಮೇಲಿರುವ ಮೈಸೂರು ಅಗ್ನಿಶಿಲೆ ಮತ್ತು ರೂಪಾಂತರ ಶಿಲೆಗಳಿಂದ ಕೂಡಿದೆ. ಜಿಲ್ಲೆಯ ಪಶ್ಚಿಮಕ್ಕೆ ಕೊಡಗು, ಉತ್ತರಕ್ಕೆ ಮಂಡ್ಯ, ಆಗ್ನೇಯ ದಿಕ್ಕಿಗೆ ತಮಿಳುನಾಡು, ವಾಯುವ್ಯಕ್ಕೆ ಹಾಸನ ಹಾಗೂ ನೈಋತ್ಯಕ್ಕೆ ಕೇರಳಗಳಿವೆ. ೧೧’೩೦’ ಉತ್ತರ ಅಕ್ಷಾಂಶದಿಂದ ೧೨’೫೦’ ಉತ್ತರ ಅಕ್ಷಾಂಶ ಹಾಗೂ ೭೫’೪೫’ ಪೂರ್ವ ರೇಖಾಂಶದಿಂದ ೭೭’೪೫’ ಪೂರ್ವ ರೇಖಾಂಶದವರೆಗಿನ ೬೮೫೪ ಚ.ಕಿ.ಮೀ. ಭೂಪ್ರದೇಶದಲ್ಲಿದೆ. ಸಮುದ್ರ ಮಟ್ಟದಿಂದ ಸರಾಸರಿ ೭೦೦ ರಿಂದ ೯೦೦ ಮೀಟರ್‌ಗಳಷ್ಟು ಎತ್ತರ ಪ್ರದೇಶದಲ್ಲಿರುವ ಈ ಜಿಲ್ಲೆ ವಾರ್ಷಿಕವಾಗಿ ಸರಾಸರಿ ೮೯ ಮಿ.ಮೀ. ನಷ್ಟು ಮಳೆ ಪಡೆಉತ್ತದೆ. ಸಾಮಾನ್ಯ ಉಷ್ಣಾಂಶವು ಚಳಿಗಾಲದಲ್ಲಿ ೧೧ ಡಿಗ್ರಿಯಿಂದ ಬೇಸಿಗೆ ಕಾಲದಲ್ಲಿ ೩೮ ಡಿಗ್ರಿಗಳ ಸೆಲ್ಶಿಯಸ್‌ತನಕವೂ ಇರುತ್ತದೆ. ಉತ್ತರ ಪಶ್ಚಿಮ ಮತ್ತು ಪೂರ್ವಭಾಗಗಳ ಮೂಲಕ ಹರಿಯುವ ಕಾವೇರಿ ಜಿಲ್ಲೆಯ ಮುಖ್ಯ ನದಿಯಾಗಿದ್ದು ಕಪಿಲ, ಲಕ್ಷ್ಮಣ ತೀರ್ಥ ಹಾಗೂ ಲೋಕಪಾವನಿ ಇತರ ಪ್ರಮುಖ ನದಿಗಳು.

ವಿಸ್ತೀರ್ಣ ಮತ್ತು ಜನಸಂಖ್ಯೆ
ಮೈಸೂರು ಜಿಲ್ಲೆಯ ಭೂವಿಸ್ತೀರ್ಣ ೬೨೬೮ ಚದರ ಕಿಮೀ ಆಗಿದೆ ಮತ್ತು ೨೦೦೧ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆಯು ೨೬,೪೧,೦೨೭ ಆಗಿದ್ದು ಕರ್ನಾಟಕದ ಜನಸಂಖ್ಯೆಯಾದ ೫೨೯ ಲಕ್ಷಗಳ ಶೇ. ೪.೯೯ ಆಗಿದೆ. ಮೈಸೂರು ತಾಲೂಕು ೭ ಕಂದಾಯ ತಾಲೂಕುಗಳನ್ನು ಹಾಗೂ ೯ ಶೈಕ್ಷಣಿಕ ವಲಯಗಳನ್ನು ಹೊಂದಿದೆ.

Sunday, 27 October 2013

ವಿದ್ಯಾರ್ಥಿಗಳಿಗಾಗಿ ಈ ನುಡಿಗಳು

ವಿದ್ಯಾರ್ಥಿಗಳೇ, ನಿಮ್ಮ ಮಾತೃಭಾಷೆ ಕನ್ನಡವೇ? ಇಂಗ್ಲೀಷ್ ಪಠ್ಯವನ್ನು ಅರ್ಥ ಮಾಡಿಕೊಳ್ಳುವದು ಕಷ್ಟವಾಗುತ್ತಿದೆಯೇ? ಹಾಗಿದ್ದರೆ ನಿಮ್ಮ ಸಮಸ್ಯೆಗೊಂದು ಸರಳ ಪರಿಹಾರ ಇಲ್ಲಿದೆ...

          ಪಾಠವನ್ನು ಮೊದಲೊಮ್ಮೆ ಇಡಿಯಾಗಿ ಓದಿರಿ. ನಿಮಗೆ ಅರ್ಥವಾಗುತ್ತಿಲ್ಲ ಎನಿಸಿದ ಪದಗಳಿಗೆ ನಿಘಂಟಿನಲ್ಲಿ ಅರ್ಥ ಹುಡುಕಿ. ಅವುಗಳ ಅರ್ಥವನ್ನು ಬಾಯಿಪಾಠ ಮಾಡಿರಿ ನಂತರ ಪುನಃ ಎರಡನೇ ಬಾರಿ ಇಡಿಯಾಗಿ ಆ ಪಾಠವನ್ನು ಓದಿ. ಈ ಸಲ ಆ ಪಾಠ ಬಹುಮಟ್ಟಿಗೆ ಅರ್ಥವಾಗಿರುತ್ತದೆ. ಹಾಗೆಂದು ಅಲ್ಲಿಗೆ ಪುಸ್ತಕ ಮುಚ್ಚಿಡಬೇಡಿ. "ಮುಟ್ಟಿದ್ದಕ್ಕೆ ಮೂರು ಸಲ" ಎನ್ನುವಂತೆ ಮೂರನೇ ಬಾರಿಯೂ ಆ ಪಾಠವನ್ನು ಇಡಿಯಾಗಿ ಓದಿ. ಆಗ ಆ ಪಾಠ ನಿಮಗೆ ಸಂಪೂರ್ಣವಾಗಿ ಮನದಟ್ಟಾಗಿರುತ್ತದೆ. ಈ ಪದ್ಧತಿಗೆ "ಸಿಂಪಲ್ ರೀಡಿಂಗ್ ಅಂಡ್ ರಿ ರೀಡಿಂಗ್ ಹ್ಯಾಬಿಟ್" ಎನ್ನುತ್ತಾರೆ.

"ಅಯ್ಯೋ, ನನಗೆ ಏಕಾಗ್ರತೆಯೇ ಇಲ್ಲ, ಓದು ತಲೆಗೆ ಹತ್ತುತ್ತಿಲ್ಲ. ಓದಲಿಕ್ಕೆ ಕುಳಿತರೆ ಮನಸ್ಸು ಚಂಚಲತೆಯಿಂದ ಅತ್ತಿತ್ತ ಹರಿದಾಡುತ್ತದೆ." ಎಂದು ಯೋಚಿಸುತ್ತಿರುವಿರೇನು? ಹಾಗಾದರೆ ಪಟ್ಟಣದಲ್ಲಿ ಚಿತ್ರಮಂದಿರಕ್ಕೆ ಬಂದಿರುವ ಒಂದು ಹೊಸ ಚಿತ್ರವನ್ನು ನೋಡಿಕೊಂಡು ಬನ್ನಿ. ಇದೇನಿದು ಹೀಗೆ ಹೇಳುತ್ತಿದ್ದಾರಲ್ಲ ಎನ್ನುವಿರೇನು? ಸ್ವಲ್ಪ ತಡೆದು ಯೋಚಿಸಿ - ಮೂರು ಘಂಟೆಗಳ ಕಾಲ ಚಲನಚಿತ್ರ ನೋಡುವಾಗ ಅತ್ತಿತ್ತ ಹರಿದಾಡದ ಮನಸ್ಸು, ಭಂಗಗೊಳ್ಳದ ಏಕಾಗ್ರತೆ, ಅಭ್ಯಾಸ ಮಾಡುವಾಗ ಏಕೆ ವ್ಯತಿರಿಕ್ತವಾಗಿ ವರ್ತಿಸುತ್ತವೆ? ಇಲ್ಲಿ ನಮಗೆ ಏಕಾಗ್ರತೆ ಸಿದ್ಧಿಸಬೇಕಾದರೆ, ನಾವು ಯಾವ ವಿಷಯದ ಮೇಲೆ ಏಕಾಗ್ರತೆ ಸಿದ್ಧಿಸಿಕೊಳ್ಳಲು ಬಯಸುತ್ತೇವೆಯೋ ಆ ವಿಷಯದ ಮೇಲೆ ಆಸಕ್ತಿ ಬೆಳೆಸಿಕೊಳ್ಳಬೇಕು. ಅಂದರೆ ಇಲ್ಲಿ ಆಸಕ್ತಿಯೆಂಬುದು ಏಕಾಗ್ರತೆಯ ತಾಯಿಯಾಗಿದೆ. ಏಕಾಗ್ರತೆ ಮೂಡಿಸಿಕೊಳ್ಳಬೇಕಾದರೆ ಮೊದಲು ಆಸಕ್ತಿ ಬೆಳೆಸಿಕೊಳ್ಳಬೇಕು.


ಪ್ರಿಯ ವಿದ್ಯಾರ್ಥಿಗಳೇ, ನಿಮ್ಮಲ್ಲಿ ಕೆಲವರು "ನನಗೆ ಜ್ಞಾಪಕ ಶಕ್ತಿ ಇಲ್ಲ, ಓದಿದ್ದು ನೆನಪಿರುವದಿಲ್ಲ." ಎಂದು ಅಲವತ್ತುಕೊಳ್ಳುತ್ತಿರುತ್ತೀರಿ. ನಿಮಗಿಷ್ಟವಿರುವ ಚಲನಚಿತ್ರದ ಹೆಸರು, ನಾಯಕ, ನಾಯಕಿ ಹೆಸರುಗಳು, ಅಷ್ಟೇ ಏಕೆ;  ಹಾಡುಗಳ ಪ್ರತಿಯೊಂದು ಸಾಲುಗಳು ನಿಮಗೆ ನೆನಪಿರುತ್ತವೆ. ಇವೆಲ್ಲ ನೆನಪಿರುವಷ್ಟು ಚೆನ್ನಾಗಿ ವಿಜ್ಞಾನ, ಗಣಿತದ  ಸೂತ್ರಗಳು, ಇಂಗ್ಲೀಷ್ ಪಾಠಗಳು, ಕನ್ನಡ ಪಠ್ಯ ಮುಂತಾದವು ನೆನಪಿರುವದಿಲ್ಲ...!
ಇದಕ್ಕೆ ಕಾರಣ ಇಷ್ಟೇ :-
                 ನಾವು ಓದಿನಲ್ಲಿ ಆಸಕ್ತಿ ಬೆಳೆಸಿಕೊಂಡಿರುವದಿಲ್ಲ. ನಾವು ಯಾವುದಾದರೊಂದು ವಿಷಯವನ್ನು ಓದಿದ ಗಂಟೆಯ ನಂತರ ಓದಿದುರಲ್ಲಿ ಅರ್ಧದಷ್ಟನ್ನು ಮರೆತುಬಿಡುವ ಸಾಧ್ಯತೆಯಿದೆ. ಅದರಂತೆ, ನಂತರದ ಎಂಟು ತಾಸುಗಳಲ್ಲಿ ಓದಿದ್ದರಲ್ಲಿ ಶೇ.೬೦ರಷ್ಟು ಮರೆತುಬಿಡುವ ಸಾಧ್ಯತೆಯಿದೆ. ಆದ್ದರಿಂದಲೇ ಶಿಕ್ಷಕರು ಪಾಠ ಹೇಳಿದ ನಂತರ ಪುನರಾವರ್ತನೆ ಮಾಡುವದು ಉತ್ತಮ. ನೆನಪಿರಲಿ, ನೆನಪಿನ ಶಕ್ತಿಯನ್ನು ಅಭಿವೃದ್ಧಿಪಡಿಸುವ ಯಾವುದೇ ಲೇಹ್ಯ, ಔಷಧಿಗಳಿಲ್ಲ. ಜ್ಞಾಪಕ ಶಕ್ತಿ ಎಂಬುದು ಸಂಪೂರ್ಣವಾಗಿ ಆಸಕ್ತಿಗೆ ಸಂಬಂಧಿಸಿದ್ದು. ಆಸಕ್ತಿಯಿದ್ದರೆ, ಯಾವ ವಿಷಯವಾದರೂ ತಲೆಗೆ ಹತ್ತುತ್ತದೆ.

Higher Aim

CªÉÄÃjPÉ0iÀİè M§â PÀ¥ÀÅöà ºÀÄqÀÄUÀ. vÀAzÉ E®è. vÁ¬Ä ªÀÄvÀÆÛ§âgÀ ªÀÄ£ÉUÉ®¸À. JgÀqÀÄ ºÉÆvÀÄÛ HlPÉÌ vÀÄA§ vÉÆAzÀgÉ. ºÀÄqÀÄUÀ¤UÉ jPÉmïì gÉÆÃUÀ ¨ÉÃgÉ. PÉÊ PÁ®Ä PÀrØ0iÀÄ vÀgÀºÀ DVªÉ. ºÉÆmÉÖ H¢PÉÆArzÉ. CªÀ¤UÉ ¸ÀzÁ ºÀ¹ªÀÅ. DzÉæ ¥sÀÅmÁâ¯ï ºÀÄZÀÄÑ. MAzÀÄ ¨Áj ¸ÀÄ¢Ý §AvÀÄ. EªÀ¤gÀĪÀ Hj£À ¥ÀPÀÌzÀ°è zÉÆqÀØ ¥sÀÅmï¨Á¯ï ¥ÀAzÀå £ÀqÉ0iÀİzÉ. DV£À ¸ÀªÀð±ÉæÃµÀ× DlUÁgÀ (CªÀ£À ºÉ¸ÀgÀÄ «®ì£ï JA¢lÄÖPÉÆ¼ÉÆîÃt) DqÀÄwÛzÁÝ£É. ºÀÄqÀÄUÀ ©mÁ£É0iÉÄÃ? CªÀ¤UÉ nPÉmï vÉUÉzÀÄPÉÆ¼ÀÄîªÀ «ZÁgÀ UÉÆvÉÛà E®è. EzÀÝgÀÆ zÀÄrØ®è. PɼÀUÉ vɪÀ½PÉÆAqÀÄ £É®zÀ ªÉÄÃ¯É PÀĽvÀÄPÉÆAqÀ. UÁå®j0iÀÄ ªÉÄÃ¯É PÀĽwzÀÝ. 0iÀiÁ¥sóÀÅzÉÆÃ ²æÃªÀÄAvÀ ºÀÄqÀÄUÀ MAzÀÄ ¨Éæqï£À MAzÀÄ ZÀÆgÀÄ wAzÀÄ ©¸ÁQ©lÖ. F PÀ¥ÀÅöà ºÀÄqÀÄUÀ¤UÉ JAd°£À aAvÉ E®è. ¥sÀPÀÌ£Éà ºÁj D ¨Éæqï£ÀÄß vÉUÉzÀÄ ªÀÄtÚ£ÀÄß eÁr¹ w£ÀßvÉÆÃqÀVzÀ. DvÀ£À CvÀåAvÀ ªÉÄaÑ£À DlUÁgÀ£À DlªÀ£ÀÄß PÀtÄÚ vÀÄA©PÉÆAqÀ.

     ¥ÀAzÀå ªÀÄÄV¬ÄvÀÄ. «®ì£ï£À ¸ÀÄvÀÛ £ÀÆgÁgÀÄ ºÀÄqÀÄUÀgÀÄ, ºÀÄqÀÄV0iÀÄgÀÄ. J®ègÀÆ CªÀ£À ºÀ¸ÁÛPÀëgÀPÉÌ PÁzÀÄ ¤AvÀªÀgÀÄ. F ºÀÄqÀÄUÀ£ÀÆ CªÀ£À ¥ÀPÀÌ ºÉÆÃV ¤AvÀ. F avÀæªÀ£ÀÄß PÀtÚ ªÀÄÄAzÉ PÀ°à¹PÉÆ½î. zÁArUÀ «®ì£ï£À PÉÊ vÀnÖzÀ. K£ÀÄ ªÀÄUÀÆ? «®ì£ï §VÎ PÉýzÀ ¸Àgï, ¤ÃªÀÅ aAPÉ0iÀÄ vÀgÀºÀ NqÀÄwÛÃj. Erà ¥ÀAzÀå
ªÀÄÄV0iÀÄĪÀªÀgÉUÉ ¤ªÀÄä ªÉÄð£À PÀuÉÚà vÉUÉ¢gÀ°®è. JAzÀ ¨Á®PÀ. zsÀ£ÀåªÁzÀ ªÀÄUÀÆ JAzÀÄ «®ì£ï ªÀÄvÉÛ ºÀ¸ÁÛPÀëgÀ ªÀiÁqÀ®Ä ±ÀÄgÀÄ ªÀiÁrzÀ. JgÀqÀÄ ¤«ÄµÀUÀ¼À £ÀAvÀgÀ ªÀÄvÉÛ ¨Á®PÀ «®ì£ï£À PÉÊ vÀnÖzÀ. ªÀÄvÉÛãÀ¥Áà ¤£ÀßzÀÄ? JAzÀÄ PÉýzÀ «®ì£ï. ¸Àgï, D JgÀqÀ£Éà UÉÆÃ®£ÀÄß JµÀÄÖ ZÉ£ÁßV ºÉÆqÉ¢j! £Á£ÀÄ ºÁUÉ UÉÆÃ®Ä ªÀiÁqÀĪÀÅzÀÄ ¸ÁzsÀå«®èªÉAzÉà w½¢zÉÝ. ¤ÃªÀÅ CzÀÄãvÀ ¸Àgï «®ì£ï £ÀPÀÌ. zsÀ£ÀåªÁzÀ ªÀÄUÀÆ ªÀÄvÉÛ ºÀ¸ÁÛPÀëgÀ ªÀiÁqÀĪÀzÀgÀ°è ªÀÄUÀߣÁzÀ. ªÀÄvÉÛ MAzÀÄ ¤«ÄµÀPÉÌ «®ì£ï£À PÉÊ vÀnÖzÀ ¨Á®PÀ. F ¨Áj «®ì£ï¤UÉ PÉÆÃ¥À §A¢vÀÄÛ. £ÉÆÃqÀÄ, ªÉÄðAzÀ ªÉÄÃ¯É 0iÀiÁPÉ PÉÊ vÀlÄÖwÛÃ? ¤£ÀUÉãÀÄ ºÉüÀ¨ÉÃPÁVzÉ? JAzÀ. ºÀÄqÀÄUÀ PÀtÚgÀ½¹ ºÉýzÀ, ¸Àgï, £À£Àß ªÀÄ£É0iÀÄ°è ¤ªÀÄä J®è ¸ÁzsÀ£ÉUÀ¼À£ÀÄß §gÉ¢nÖzÉÝãÉ. ¤ªÀÄäzÁR¯ÉUÀ¼À ¥ÀnÖ0iÀÄ£Éßà ElÄÖPÉÆArzÉÝãÉ. ¸Àj D0iÀÄÄÛ, ¸ÀAvÉÆÃµÀ JAzÀ «®ì£ï ºÀħÄâ UÀAlÄ ºÁQPÉÆAqÀÄ. MAzÀÄ ¤«ÄµÀ PÀ¼É¢gÀ¨ÉÃPÀÄ, ¨Á®PÀ ªÀÄvÉÛ «®ì£ï¤UÉ, ºÉÃ, E£ÀÄß PÉÊ vÀnÖzÀgÉ, £Á£Éà vÀnÖ ©qÀÄvÉÛÃ£É ¤£ÀߣÀß, K£ÀÄ ¨ÉÃPÀÄ ¤£ÀUÉ? ºÀÄqÀÄUÀ ºÉzÀjzÀAvÉ PÀArvÀÄ. MAzÀÄ ºÉZÉÑ »AzÉ ¸ÀjzÀÄ ºÉðÃzÀ, ¸Àgï, MAzÀÄ ¢£À ¤ªÀÄä J®è zÁR¯ÉUÀ¼À£ÀÄß £Á£Éà ªÀÄÄj0iÀÄÄvÉÛãÉ. «®ì£ï ¨ÉgÀUÁV ºÉÆÃzÀ. ºÀ¸ÁÛPÀëgÀ ¤°è¹zÀ. ºÀÄqÀÄUÀ£À£ÀÄ ¢nÖ¹ £ÉÆÃrzÀ. F gÉÆÃVµÀ× ºÀÄqÀÄUÀ vÀ£Àß ¸ÁzsÀ£É0iÀÄ£ÀÄß «ÄÃj¸ÀÄvÁÛ£É!
ºÀ¢£ÁgÀÄ ªÀµÀðUÀ¼À £ÀAvÀgÀ EzÉà ¨Á®PÀ «®ì£ï£À J®è ¸ÁzsÀ£ÉUÀ¼À£ÀÄß ªÀÄÄjzÀÄ ¸ÀªÀð±ÉæÃµÀ×£ÁzÀ. CªÀ£À ºÉ¸ÀgÀÄ N..eÉ.¹A¥Àì£ï. EAxÀ ¸ÁzsÀ£É0iÀÄ£ÀÄß ºÉÃUÉ ªÀiÁr¢j JAzÀÄ PÉýzÁUÀ CªÀ£ÀÄ ¤ÃrzÀ GvÀÛgÀ J®èjUÀÆ ªÀiÁUÀðzÀ²ð. £Á£ÀÄ CvÀåAvÀ JvÀÛgÀzÀ UÀÄj0iÀĤßlÄÖPÉÆArzÉÝ ªÀÄvÉÛ ¸ÀvÀvÀªÁV CzÀ£ÀÄß ¸Á¢ü¸À®Ä ¥Àæ0iÀÄwß¹zÉ.

                                                        PÀÈ¥É- PÀgÀÄuÁ¼ÀÄ ¨Á ¨É¼ÀPÉ
                                                       qÁ|| UÀÄgÀÄgÁeï PÀgÀdV

Saturday, 19 October 2013

ಆದರ್ಶ ವಿದ್ಯಾರ್ಥಿ

    
          ವಿದ್ಯಾ ಸಂಪಾದನೆಯೇ ವಿದ್ಯಾರ್ಥಿಯ ಮುಖ್ಯ ಗುರಿ. ವಿದ್ಯಾರ್ಥಿ ಜೀವನವು ಒಂದು ತಪಸ್ಸು. ವಿದ್ಯೆಯ ಮಹತ್ವವನ್ನು ಅರಿತುಕೊಂಡ ವಿದ್ಯಾರ್ಥಿಯು ತನ್ನ ನಡೆ, ನುಡಿ ಸದ್ವರ್ತನೆಗಳಿಂದ ಆದರ್ಶಪ್ರಾಯನಾಗುತ್ತಾನೆ. ವಿದ್ಯಾರ್ಥಿಯು ಪ್ರತಿಭಾವಂತನಾಗಿದ್ದರಷ್ಟೇ ಸಾಲದು. ಅವನ ಓದು, ಜೀವನ ಕ್ರಮಗಳುಒಂದು ಶಿಸ್ತಿಗೆ ಒಳಪಡಬೇಕು. ಗುರಿಮುಟ್ಟೂವ ಹಾದಿಯಲ್ಲಿ ಪ್ರಗತಿಪರ ವಿಚಾರಧೋರಣೆ ಅವನದಾಗಬೇಕು. ಅಂಥವನು ನಿಜವಾಗಿ ಆದರ್ಶ ಎನಿಸಿಕೊಳ್ಳುತ್ತಾನೆ. ಅವನ ಜೀವನವು ಇತರರಿಗೆ ಮಾದರಿಯಾಗಿರುತ್ತದೆ.ಆದರ್ಶವಿದ್ಯಾರ್ಥಿಯು ವಿಶೇಷ ಗುಣಲಕ್ಷಣಗಳನ್ನು ಹೊಂದಿರುತ್ತಾನೆ. ಸಮಯದ ಕಡೆಗೆ ಸದಾ ಗಮನವಿಟ್ಟಿರುತ್ತಾನೆ. ವ್ಯರ್ಥವಾಗಿ ವೇಳೆ ಕಳೆಯುವುದಿಲ್ಲ. ನಿಯಮಿತವಾಗಿ ಶಾಲೆಗೆ ಹೋಗುತ್ತಾನೆ. ಶಾಲೆ ನಿಯಮಗಳನ್ನು ಪಾಲಿಸುತ್ತಾನೆ. ಲಕ್ಷ್ಯವಿಟ್ಟು ನಿಷ್ಟೆಯಿಂದ ಓದುತ್ತಾನೆ. ಪರೀಕ್ಷೆಗಳನ್ನು ಪಾಸು ಮಾಡುವುದರಲ್ಲಿ ಮಾತ್ರ ಅವನಿಗೆ ಸಮಾಧಾನ ದೊರೆಯುವುದಿಲ್ಲ. ಉನ್ನತ ಅಂಕಗಳನ್ನು ಪಡೆದು ಪ್ರತಿಭಾವಂತ ವಿದ್ಯಾರ್ಥಿ ಎನಿಸಿಕೊಳ್ಳಲು ಸತತ ಪರಿಶ್ರಮ ಪಡುತ್ತಾನೆ.ಗುರುಹಿರಿಯರಲ್ಲಿ ಅಪಾರ ಭಕ್ತಿ ಇಟ್ಟಿರುತ್ತಾನೆ. ಅವರ ಜೊತೆ ವಿಧೇಯತೆಯಿಂದ ನಡೆದುಕೊಳ್ಳುತ್ತಾನೆ.
ವಿನಯವು ಆದರ್ಶ ವಿದ್ಯಾರ್ಥಿಯ ಮುಖ್ಯಲಕ್ಷಣವಾಗಿದೆ. ತಂದೆ ತಾಯಿಯರ ಮಾತಿಗೆ ವಿರುದ್ಧವಾಗಿ ಅವನೆಂದೂ ವರ್ತಿಸುವುದಿಲ್ಲ. ಕೆಟ್ಟ ಹುಡುಗರ ಗೆಳೆತನ ಮಾಡುವುದಿಲ್ಲ. ಒಳ್ಳೆಯದನ್ನು ಓದುತ್ತಾನೆ. ಒಳ್ಳೆಯದನ್ನು ನೋಡುತ್ತಾನೆ. ಸಜ್ಜನರ ಸಂಗಕ್ಕೆ ಹಾತೊರೆಯುತ್ತಾನೆ. ಸತ್ಯವನ್ನು ಪಾಲಿಸುತ್ತಾನೆ. ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಾನೆ. ಎಲ್ಲರ ಪ್ರೀತಿ ವಿಶ್ವಾಸಗಳಿಗೆ ಪಾತ್ರನಾಗುತ್ತಾನೆ.ಇಂಥ ಆದರ್ಶ ವಿದ್ಯಾರ್ಥಿಯೇ ಮುಂದೆ ಆದರ್ಶ ಪುರುಷನಾಗುತ್ತಾನೆ. ಇತಿಹಾಸ ಪ್ರಸಿದ್ಧನಾಗುತ್ತಾನೆ. ಆದರ್ಶ ಎನಿಸಿಕೊಳ್ಳುವುದು ಸಾಮಾನ್ಯ ಸಾಧನೆಯೇನಲ್ಲ. ಹಾಗೆಂದು ಪರಿಶ್ರಮ ಪಟ್ಟರೆ ಯಾವುದೂ ಅಸಾಧ್ಯವಲ್ಲ. ಆದ್ದರಿಂದ ನಾವೆಲ್ಲರೂ ಆದರ್ಶ ವ್ಯಕ್ತಿಗಳಾಗುವತ್ತ ಪ್ರಯತ್ನ ಮಾಡಬೇಕಾಗಿದೆ.

Thursday, 10 October 2013

ಔರಂಗಜೇಬನನ್ನು ಬಗ್ಗು ಬಡಿದ ಸಂಭಾಜಿರಾಜ.


ಔರಂಗಜೇಬನನ್ನು ೨೭ ವರ್ಷ ಉತ್ತರ ಹಿಂದೂಸ್ಥಾನದಿಂದ ದೂರವಿಡುವ ಸಂಭಾಜಿರಾಜ ! ಸಂಭಾಜಿರಾಜರು ತಮ್ಮ ಅಲ್ಪಾಯುಷ್ಯದಲ್ಲಿ ಮಾಡಿರುವ ಅಲೌಕಿಕ ಕಾರ್ಯಗಳ ಪರಿಣಾಮವು ಸಂಪೂರ್ಣ ಹಿಂದೂಸ್ಥಾನದ ಮೇಲಾಯಿತು. ಆದುದರಿಂದ ಪ್ರತಿಯೊಬ್ಬ ಹಿಂದೂ ಬಾಂಧವರು ಅವರ ಬಗ್ಗೆ ಕೃತಜ್ಞರಾಗಿರಬೇಕು. ಅವರು ಔರಂಗಜೇಬನ ಎಂಟು ಲಕ್ಷ ಸೈನ್ಯವನ್ನು ಧೈರ್ಯದಿಂದ ಎದುರಿಸಿದರು ಹಾಗೂ ಬಹಳಷ್ಟು ಮೊಘಲ್ ಸರದಾರರನ್ನು ಯುದ್ಧದಲ್ಲಿ ಸೋಲಿಸಿ ಅವರಿಗೆ ಓಡಲು ಭೂಮಿ ಸಾಲದಂತೆ ಮಾಡಿದರು. ಇದರಿಂದ ಔರಂಗಜೇಬನು ಮಹಾರಾಷ್ಟ್ರದಲ್ಲಿ ದೀರ್ಘಕಾಲದವರೆಗೆ ಹೋರಾಡುತ್ತಿದ್ದನು ಹಾಗೂ ಸಂಪೂರ್ಣ ಉತ್ತರ ಹಿಂದೂಸ್ಥಾನವು ಅವನ ದಬ್ಬಾಳಿಕೆಯಿಂದ ಮುಕ್ತಗೊಂಡಿತು. ಇದು ಸಂಭಾಜಿರಾಜರ ಅತ್ಯಂತ ಮಹತ್ವಪೂರ್ಣ ಕಾರ್ಯ ಎಂದು ಹೇಳಬಹುದು. ಅವರು ಒಂದು ವೇಳೆ ಔರಂಗಜೇಬನೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೆ, ಅಥವಾ ಅವನ ಗುಲಾಮಗಿರಿಯನ್ನು ಸ್ವೀಕರಿಸಿದ್ದರೆ, ಅವನು ಎರಡು-ಮೂರು ವರ್ಷಗಳಲ್ಲಿ ಪುನಃ ಉತ್ತರ ಹಿಂದೂಸ್ಥಾನಕ್ಕೆ ಹೋಗುತ್ತಿದ್ದನು; ಆದರೆ ಸಂಭಾಜಿರಾಜರ ತೀವ್ರ ಹೋರಾಟದಿಂದ, ೨೭ ವರ್ಷಗಳ ಕಾಲ ಔರಂಗಜೇಬನು ದಕ್ಷಿಣದಲ್ಲಿ ಸಿಕ್ಕಿಬಿದ್ದನು ಹಾಗೂ ಇದರಿಂದ ಉತ್ತರದಲ್ಲಿ ಬುಂದೇಲಖಂಡ, ಪಂಜಾಬ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಹಿಂದೂಗಳ ಹೊಸ ಅಧಿಕಾರದ ಉದಯವಾಗಿ ಹಿಂದೂ ಸಮಾಜಕ್ಕೆ ಸಂರಕ್ಷಣೆ ಲಭಿಸಿತು.

 ಸಂಭಾಜಿರಾಜರ ಸಾಮರ್ಥ್ಯದ ಬಗ್ಗೆ ಪೋರ್ತುಗೀಜರಿಗಿದ್ದ ಭಯ!

 ಸಂಭಾಜಿರಾಜರು ಗೋವಾದ ಮೇಲೆ ಆಕ್ರಮಣ ಮಾಡಿ ಧರ್ಮಾಂಧ ಪೋರ್ತುಗೀಜರನ್ನು ವಶಕ್ಕೆ ತೆಗೆದುಕೊಂಡರು. ಅವರೊಂದಿಗೆ ಒಪ್ಪಂದ ಮಾಡಿ ಗೋವಾದ ಅವರ ಧರ್ಮಪ್ರಸಾರಕ್ಕೆ ತಡೆಯೊಡ್ಡಿದ್ದರಿಂದ ಗೋವಾ ಪ್ರದೇಶದಲ್ಲಿನ ಹಿಂದೂಗಳ ರಕ್ಷಣೆಯಾಯಿತು ಎಂಬುದು ಮರೆಯಲು ಅಸಾಧ್ಯವಾದ ಸಂಗತಿ. ಪೋರ್ತುಗೀಜರಿಗೆ ಸಂಭಾಜಿರಾಜರ ಬಗ್ಗೆ ಬಹಳ ಭಯವಿತ್ತು. ಅವರು ಆಂಗ್ಲರಿಗೆ ಬರೆದ ಪತ್ರದಲ್ಲಿ ‘ಸದ್ಯದ ಪರಿಸ್ಥಿತಿಯಲ್ಲಿ ಸಂಭಾಜಿ ಮಹಾರಾಜರೇ ಸರ್ವಶಕ್ತಿಮಾನರಾಗಿದ್ದಾರೆ, ಇದು ನಮ್ಮ ಅನುಭವವಾಗಿದೆ !’ ಎಂದು ನಮೂದಿಸಿದ್ದಾರೆ. ಶತ್ರುವಿನ ಈ ಪ್ರಮಾಣ ಪತ್ರವು ಮಹಾರಾಜರ ಸಾಮರ್ಥ್ಯದ ಕಲ್ಪನೆ ನೀಡುತ್ತದೆ.

ನಿರಾಧಾರ ಮತಾಂತರಗೊಂಡವರಿಗೆ ಅಧಾರ ಸಂಭಾಜಿ ಮಹಾರಾಜರು!

ಶಿವಾಜಿ ಮಹಾರಾಜರು ನೇತಾಜಿ ಪಾಲಕರರನ್ನು ಪುನಃ ಹಿಂದೂ ಧರ್ಮಕ್ಕೆ ಬರಮಾಡಿಕೊಂಡ ವಿಷಯ ಎಲ್ಲರಿಗೂ ತಿಳಿದಿದೆ; ಆದರೆ ಸಂಭಾಜಿರಾಜರು ತಮ್ಮ ರಾಜ್ಯದಲ್ಲಿ ‘ಶುದ್ಧೀಕರಣಕ್ಕಾಗಿ’ ಸ್ವತಂತ್ರ ವಿಭಾಗವನ್ನು ಸ್ಥಾಪಿಸಿರುವುದು ಮಹತ್ತ್ವದ ವಿಷಯವಾಗಿದೆ. ಹರಸೂಲ ಎಂಬ ಊರಿನ ಕುಲಕರ್ಣಿ ಮನೆತನದ ಬ್ರಾಹ್ಮಣನ ಕಥೆಯು ಸಂಭಾಜಿರಾಜರ ಇತಿಹಾಸದಲ್ಲಿ ಬರೆದಿಬರೆದಿಡಲಾಗಿದೆ. ಒತ್ತಾಯಪೂರ್ವಕವಾಗಿ ಮುಸಲ್ಮಾನನಾಗಿದ್ದ ಈ ಕುಲಕರ್ಣಿಯು ಹಿಂದೂ ಧರ್ಮಕ್ಕೆ ಮರಳಲು ಬಹಳ ಪ್ರಯತ್ನಿಸುತ್ತಿದ್ದನು; ಆದರೆ ಸ್ಥಳೀಯ ಬ್ರಾಹ್ಮಣರು ಅವನಿಗೆ ಸಹಾಯ ಮಾಡುತ್ತಿರಲಿಲ್ಲ. ಕೊನೆಗೆ ಈ ಬ್ರಾಹ್ಮಣನು ಸಂಭಾಜಿರಾಜರನ್ನು ಭೇಟಿಯಾಗಿ ತನ್ನ ವ್ಯಥೆಯನ್ನು ಅವರ ಎದುರು ಮಂಡಿಸಿದನು. ಮಹಾರಾಜರು ತಕ್ಷಣ ಅವನ ಶುದ್ಧೀಕರಣದ ವ್ಯವಸ್ಥೆ ಮಾಡಿ ಅವನಿಗೆ ಪುನಃ ಸ್ವಧರ್ಮದಲ್ಲಿ ಪ್ರವೇಶ ನೀಡಿದರು. ರಾಜನ ಔದಾರ್ಯದಿಂದ ಬಹಳಷ್ಟು ಹಿಂದೂಗಳು ಪುನಃ ಸ್ವಧರ್ಮಕ್ಕೆ ಮರಳಿದರು!

ಸಂಭಾಜಿ ರಾಜರ ಜ್ವಲಂತ ಧರ್ಮಾಭಿಮಾನ!
                        
ಜನರಿಗೆ ಸಂಭಾಜಿ ರಾಜರ ಬಲಿದಾನದ ಇತಿಹಾಸದ ಸರಿಯಾದ ಮಾಹಿತಿ ಇಲ್ಲ. ಸಂಭಾಜಿರಾಜರು ಫೆಬ್ರವರಿ ೧, ೧೬೮೯ ರಂದು ಸಂಗಮೇಶ್ವರದಲ್ಲಿ ಕೆಲವರ ಆಸ್ತಿಯ ಬಗೆಗಿನ ಜಗಳದ ಬಗ್ಗೆ ತಿಳಿದುಕೊಳ್ಳುತ್ತಿದ್ದಾಗ, ಗಣೋಜಿ ಶಿರ್ಕೆಯ ಪಿತೂರಿಯಿಂದ ಬಂಧಿಸಲ್ಪಟ್ಟರು. ಆಗ ಮೋಘಲರು ಲಕ್ಷಾಂತರ ಸೈನಿಕರ ಬಂದೋಬಸ್ತಿನಲ್ಲಿ ರಾಜರ ಮೆರವಣಿಗೆ ಮಾಡಿದರು. ಅವರಿಗೆ ಶಾರೀರಿಕ ಹಾಗೂ ಮಾನಸಿಕ ಯಾತನೆ ನೀಡಿದರು. ವಿದೂಷಕನ ಬಟ್ಟೆ ಹಾಕಿಸಿ, ಕಟ್ಟಿಗೆಯ ಪಂಜರದಲ್ಲಿ ಕೈ ಕಾಲುಗಳನ್ನು ಸಿಕ್ಕಿಸಲಾಯಿತು. ಆ ಕಾಲದ ಚಿತ್ರಕಾರನು ಬಿಡಿಸಿದ ರಕ್ತದಿಂದ ತುಂಬಿದ ಸ್ಥಿತಿಯಲ್ಲಿರುವ ಸಂಭಾಜಿರಾಜರ ಚಿತ್ರವು ಕರ್ನಾವತಿ (ಅಹಮದಾಬಾದ) ನಗರ್ ಎಂಬಲ್ಲಿ ಸಂಗ್ರಹಾಲಯದಲ್ಲಿ ಇಂದಿಗೂ ಇದೆ. ಆ ಚಿತ್ರದಲ್ಲಿ ಅಸಂಖ್ಯ ಯಾತನೆಗಳನ್ನು ಸಹಿಸುವ ಈ ತೇಜಸ್ವಿ ಹಿಂದೂ ರಾಜನ ದೃಷ್ಟಿಯು ಅತ್ಯಂತ ಕ್ರುದ್ಧವಾಗಿದೆ, ಎಂಬುದು ಕಾಣುತ್ತದೆ. ಸಂಭಾಜಿರಾಜರ ಸ್ವಾಭಿಮಾನದ ಪರಿಚಯವು ಆ ಕ್ರುದ್ಧ ದೃಷ್ಟಿಯಿಂದಲೇ ತಿಳಿಯುತ್ತದೆ. ಫೆಬ್ರವರಿ ೧೫, ೧೬೮೯ ರಂದು ಪೇಡಗಾವನ ಕೋಟೆಯಲ್ಲಿ ಔರಂಗಜೇಬನನೊಂದಿಗೆ ರಾಜರ
ಮುಖತ ಭೇಟಿ ಆಯಿತು. ‘ಕಾಫೀರರ ರಾಜ ಸಿಕ್ಕಿದನು’ ಎಂದು ಔರಂಗಜೇಬನು ನಾಮಾಜು ಪಠಿಸಿ ಅಲ್ಲಾನ ಉಪಕಾರವೆಂದು ತಿಳಿದು ಅತ್ಯಾನಂದ ವ್ಯಕ್ತಪಡಿಸಿದನು. ಆಗ ಔರಂಗಜೇಬನ ಪ್ರಧಾನ ಮಂತ್ರಿ ಇರವಲಾಸಖಾನನು ಸಂಭಾಜಿರಾಜರಿಗೆ ಶರಣಾಗಲು ತಿಳಿಸಿದನು. ಸಂತಪ್ತಗೊಂಡ ಸಂಭಾಜಿ ರಾಜರು ಔರಂಗಜೇಬನಿಗಾಗಿ 'ಮುಜರಾ' ಮಾಡಲು ನಿರಾಕರಿಸಿದರು. ಅದೊಂದು ನಿರ್ಣಾಯಕ ಕ್ಷಣವಾಗಿತ್ತು. ಮಹಾರಾಜರು ವೈಯಕ್ತಿಕ ಸುಖದ ಅಭಿಲಾಷೆಗಿಂತಲೂ ಹಿಂದುತ್ವದ ಅಭಿಮಾನವನ್ನು ಮಹತ್ತ್ವದ್ದೆಂದು ತಿಳಿದಿದ್ದರು. ತಮ್ಮ ತಂದೆ ನಿರ್ಮಿಸಿದ ಸ್ವಾಭಿಮಾನದ ಮಹಾನ ಪರಂಪರೆಯನ್ನು ಅವರು ಕಾಪಾಡಿದರು. ಇದರ ನಂತರ ಎರಡು ದಿನಗಳಲ್ಲಿ ಔರಂಗಜೇಬನ ಅನೇಕ ಸರದಾರರು ಅವರ ಮನ ಒಲಿಸಲು ಪ್ರಯತ್ನಿಸಿದರು. ಅವರಿಗೆ ‘ಮುಸಲ್ಮಾನರಾದರೆ ಜೀವದಾನ ಸಿಗುವುದು’, ಎಂಬುದಾಗಿ ಹೇಳಲಾಯಿತು; ಆದರೆ ಸ್ವಾಭಿಮಾನಿ ಸಂಭಾಜಿ ರಾಜರು ಸತತವಾಗಿ ಈ ಮುಸಲ್ಮಾನ ಸರದಾರರನ್ನು ಅವಮಾನಗೊಳಿಸಿದರು.

ಧರ್ಮಕ್ಕಾಗಿ ಬಲಿದಾನ ನೀಡಿ ಇತಿಹಾಸದಲ್ಲಿ ಅಮರರಾದ ಸಂಭಾಜಿ ರಾಜರು !

ಕೊನೆಗೆ ಆ ಪಾಪೀ ಔರಂಗಜೇಬ ಅವರ ಕಣ್ಣು ಕುಕ್ಕಿಸಿದನು, ನಾಲಿಗೆ ಕತ್ತರಿಸಿದನು ಆದರೂ ಮೃತ್ಯುವು ರಾಜನನ್ನು ಸ್ಪರ್ಷಿಸಲಿಲ್ಲ. ದುಷ್ಟ ಮೊಘಲ ಸರದಾರರು ಅವರಿಗೆ ಪ್ರಚಂಡ ಯಾತನೆ ನೀಡಿದರು. ಅವರ ದಿವ್ಯ ಧರ್ಮಾಭಿಮಾನದಿಂದಾಗಿ ಅವರಿಗೆ ಈ ಎಲ್ಲ ಕಷ್ಟಗಳನ್ನು ಅನುಭವಿಸಲೇಬೇಕಾಯಿತು. ಮಾರ್ಚ ೧೨, ೧೬೮೯ ರಂದು ಯುಗಾದಿ ಹಬ್ಬವಿತ್ತು. ಹಿಂದೂಗಳ ಹಬ್ಬದಂದು ಅವರನ್ನು ಅಪಮಾನಗೊಳಿಸಲು ಮಾರ್ಚ ೧೧ ಫಾಲ್ಗುಣ ಅಮಾವಾಸ್ಯೆಯಂದು ಸಂಭಾಜಿರಾಜರ ಕೊಲೆ ಮಾಡಲಾಯಿತು. ಅವರ ಮಸ್ತಕವನ್ನು ಬರ್ಚಿಗೆ ಚುಚ್ಚಿ ಮೊಘಲರು ಅವರನ್ನು ಅಪಮಾನಗೊಳಿಸಿ ಮೆರವಣಿಗೆ ಮಾಡಿದರು. ಈ ರೀತಿ ಫೆಬ್ರುವರಿ ೧ ರಿಂದ ಮಾರ್ಚ ೧೧ ರವರೆಗೆ ಹೀಗೆ ೩೯ ದಿನಗಳ ಯಮಯಾತನೆಯನ್ನು ಸಹಿಸಿ ಸಂಭಾಜಿರಾಜರು ಹಿಂದುತ್ವದ ತೇಜವನ್ನು ಬೆಳೆಸಿದರು. ಧರ್ಮಕ್ಕಾಗಿ ಬಲಿದಾನ ಮಾಡಿದ ಈ ರಾಜನು ಇತಿಹಾಸದಲ್ಲಿ ಅಮರನಾದನು. ಔರಂಗಜೇಬನು ಮಾತ್ರ ರಾಜಧರ್ಮವನ್ನು ತುಳಿಯುವ ಇತಿಹಾಸದ ದರಬಾರಿನಲ್ಲಿ ಅಪರಾಧಿಯಾದನು.

 ಸಂಭಾಜಿ ರಾಜರ ಬಲಿದಾನದ ನಂತರ ಮಹಾರಾಷ್ಟ್ರದಲ್ಲಿ ನಡೆದ ಕ್ರಾಂತಿ!
 ಸಂಭಾಜಿ ರಾಜರ ಈ ಬಲಿದಾನದಿಂದ ಸಂಪೂರ್ಣ ಮಹಾರಾಷ್ಟ್ರವು ಹೊತ್ತಿ ಉರಿಯಿತು ಹಾಗೂ ಪಾಪಿ ಔರಂಗಜೇಬನ ಜೊತೆ ಮರಾಠರ ನಿರ್ಣಾಯಕ ಹೋರಾಟ ಪ್ರಾರಂಭವಾಯಿತು. ಆ ಕಾಲವನ್ನು ‘ಹುಲ್ಲಿನ ಕಡ್ಡಿಗೆ ಬರ್ಚಿಗಳು ಹುಟ್ಟಿಕೊಂಡವು ಹಾಗೂ ಮನೆಮನೆಗಳು ಕೋಟೆಗಳಾದವು, ಮ
ಮನೆಯಲ್ಲಿ ಮಾತೆ ಭಗಿನಿಯರೆಲ್ಲರೂ ತಮ್ಮ ಗಂಡಸರಿಗೆ ರಾಜನ ಹತ್ಯೆಯ ಸೇಡು ತೀರಿಸಲು ಹೇಳತೊಡಗಿದರು’, ಎಂದು ವರ್ಣಿಸಿದ್ದಾರೆ. ಸಂಭಾಜಿ ಮಹಾರಾಜರ ಬಲಿದಾನದಿಂದ ಮರಾಠರ ಸ್ವಾಭಿಮಾನವು ಪುನಃ ಜಾಗೃತವಾಯಿತು. ಇದು ಮುನ್ನೂರು ವರ್ಷಗಳ ಹಿಂದಿನ ರಾಷ್ಟ್ರ ಜೀವನದಲ್ಲಿನ ಅತ್ಯಂತ ಮಹತ್ತ್ವದ ಅಂಗವಾಗಿತ್ತು. ಇದರಿಂದ ಇತಿಹಾಸದಲ್ಲಿ ತಿರುವು ಮೂಡಿತು. ಜನರ ಬೆಂಬಲದಿಂದ ಮರಾಠರ ಸೈನ್ಯ ಬೆಳೆಯುತ್ತ ಹೋಯಿತು ಹಾಗೂ ಸೈನ್ಯದ ಸಂಖ್ಯೆಯು ಎರಡು ಲಕ್ಷದವರೆಗೆ ತಲುಪಿತು. ಅಲ್ಲಲ್ಲಿ ಮೊಘಲರಿಗೆ ಪ್ರಖರವಾದ ವಿರೋಧ ಪ್ರಾರಂಭವಾಯಿತು ಹಾಗೂ ಕೊನೆಗೆ ಮಹಾರಾಷ್ಟ್ರದಲ್ಲಿಯೇ ೨೭ ವರ್ಷಗಳ ನಿಷ್ಫಲ ಯುದ್ಧದ ನಂತರ ಔರಂಗಜೇಬನ ಅಂತ್ಯವಾಯಿತು. ಮೊಘಲರ ಅಧಿಕಾರ ಕ್ಷೀಣಸಿ ಹಿಂದೂಗಳ ಶಕ್ತಿಶಾಲಿ ಸಾಮ್ರಾಜ್ಯವು ಉದಯಗೊಂಡಿತು. 

೨೭ ವರ್ಷ ಔರಂಗಜೇಬನ ಪಾಶವಿ ಆಕ್ರಮಣದ ವಿರುದ್ಧ ಮರಾಠರು ಮಾಡಿದ ಹೋರಾಟದಲ್ಲಿ ಹಂಬೀರರಾವ, ಸಂತಾಜಿ, ಧನಾಜಿಯಂತಹ ಅನೇಕ ಯೋಧರಿದ್ದರು; ಆದರೆ ಈ ಹೋರಾಟಕ್ಕೆ ತಿರುವು ಮೂಡಿದ್ದು ಸಂಭಾಜಿ ರಾಜರ ಬಲಿದಾನದಿಂದ ಆಗಿರುವ ಜಾಗೃತಿಯಿಂದಲೇ ಎಂಬುದನ್ನು ಮರೆಯುವಂತಿಲ್ಲ.