ನಮ್ಮ ಶಾಲೆ ಮತ್ತು ಶಾಲೆಯ ಬ್ಲಾಗ್ ಬಗ್ಗೆ ನಿಮ್ಮ ಸಲಹೆ-ಸೂಚನೆ, ಅಭಿಪ್ರಾಯ ತಿಳಿಯಲು ಕಾತರರಾಗಿದ್ದೇವೆ. ನಮ್ಮ ಶಾಲೆಯ ಇ-ಮೇಲ್ ವಿಳಾಸ : ccakpschool@gmail.com
ನಮ್ಮ ಶಾಲೆಯ Facebook I.D :
ನಮ್ಮ ಶಾಲೆಯ Facebook I.D :
Saturday, 15 September 2012
Saturday, 1 September 2012
ಶಿಕ್ಷಕರು ಹೇಗಿರಬೇಕು?
ಶಿಕ್ಷಕರು ಹೇಗಿರಬೇಕು?
ಗುರುಬ್ರಹ್ಮ ಗುರುವಿಷ್ಣು
ಗುರುದೇವೋ ಮಹೇಶ್ವರ
ಗುರುಸಾಕ್ಷಾತ್ ಪರಬ್ರಹ್ಮ
ತಸ್ಮೈಶ್ರೀ ಗುರುವೇ ನಮಃ ಎನ್ನುವಂತೆ, ಗುರುವನ್ನು ಬ್ರಹ್ಮ, ವಿಷ್ಣು, ಮಹೇಶ್ವರರಿಗೆ ಹೋಲಿಸಲಾಗಿದೆ. ಗುರುವಿನ ಅಂದರೆ, ಶಿಕ್ಷಕನ ಸ್ಥಾನ ಬಹಳ ಮಹತ್ವದ್ದು. ಶ್ರೇಷ್ಠವಾದದ್ದು, ಅನುಪಮವಾದದ್ದು. ನಮ್ಮ ದೇಶದ ಅತ್ಯುನ್ನತ ಗೌರವಾನ್ವಿತ ವೃತ್ತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಎಲ್ಲ ಶಿಕ್ಷಕರನ್ನು `ಶಿಕ್ಷಕ' ಎಂದು ಕರೆಯಲು ಸಾಧ್ಯವಿಲ್ಲ. ಏಕೆಂದರೆ ಶಿಕ್ಷಕ ಅನ್ನಿಸಿಕೊಳ್ಳಬೇಕಾದರೆ ಆತ ಕೆಲವು, ಅರ್ಹತೆ, ಗುಣ ವಿಶೇಷತೆಗಳನ್ನು ಹೊಂದಿರಬೇಕಾಗುತ್ತದೆ. ಶಿಕ್ಷಕನ ಕಾರ್ಯ ಬಹುಸೂಕ್ಷ್ಮವಾದದ್ದು. ನಾಲ್ಕು ಗೋಡೆಯ ಮಧ್ಯೆ ಕುಳಿತು ಒಂದು ದೇಶವನ್ನು ಬಲಿಷ್ಠವನ್ನಾಗಿ ಕಟ್ಟುವ ಅಥವಾ ಒಡೆದು ಹೋಗುತ್ತಿರುವ ಒಂದು ದೇಶವನ್ನು ಕಟ್ಟಬಲ್ಲ ಮಹಾನ್ ಶಕ್ತಿ ಈತನಿಗಿದೆ. ಇತೀಚೆಗಂತೂ ಡಿ.ಎಡ್. ಮತ್ತು ಬಿ.ಎಡ್. ವೃತ್ತಿ ಶಿಕ್ಷಣ ಕೋರ್ಸ್‍ಗಳಿಗೆ ಸೇರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಎಲ್ಲೂ ನೌಕರಿ ಸಿಗದಿದ್ದರೂ ಇಲ್ಲಾದರೂ ಸಿಗುತ್ತೆ ಎಂಬ ಆಶಾಭಾವದೊಂದಿಗೆ ಕೋರ್ಸ್ ಮಾಡುವವರು ಒಂದೆಡೆಯಾದರೆ, ಅರ್ಜಿ ಹಾಕಿ ಕೆಲಸ ಸಿಕ್ಕರೆ ಸೇರಿಕೊಂಡರಾಯಿತು ಎಂಬ ಮನೋಭಾವದವರು ಮತ್ತೊಂದೆಡೆ ಇರುತ್ತಾರೆ. ನಿಜವಾಗಿಯೂ ಇವರು ಶಿಕ್ಷಕ ತರಬೇತಿ ಕೋರ್ಸ್‍ನ್ನು ಮನಸೋ ಇಚ್ಚೆಯಿಟ್ಟು, ನಾನೊಬ್ಬ ಉತ್ತಮ ಆದರ್ಶ ಶಿಕ್ಷಕನಾಗಬೇಕೆಂಬ ಇವರು ಬರುವದಿಲ್ಲ. ಹಾಗೆ ಬರುವವರು ಕೆಲವೇ ಮಂದಿ...! ಇಂತಹವರು ಶಿಕ್ಷಕ ಸ್ಥಾನ, ಮಹತ್ವ, ಜವಾಬ್ದಾರಿ, ಕಾರ್ಯಗಳನ್ನು ಸಂಪೂರ್ಣವಾಗಿ ಅರಿಯಲು ಪ್ರಯತ್ನಿಸುತ್ತಾರೆ. ಏನನ್ನು ಬೋಧಿಸಿದರೆ, ಹೇಗೆ ಬೋಧಿಸಿದರೆ ಮಕ್ಕಳಲ್ಲಿ ಗುಣಾತ್ಮಕ ಫಲಿತಾಂಶ ಕಂಡುಕೊಳ್ಳಬಹುದು ಎಂದು ಸದಾಕಾಲ ಚಿಂತಿಸುತ್ತಿರುತ್ತಾರೆ.
ಹುಟ್ಟುವಾಗ ಎಲ್ಲ ಮಕ್ಕಳು ಒಂದೇ ರೀತಿ ಇರುತ್ತಾರೆ. ಅವರಲ್ಲಿ ಯಾವ ಬೇಧ ಭಾವ, ಮೇಲು ಕೀಳು ಇರುವದಿಲ್ಲ. ಆದರೆ ಯಾವಾಗ ಅವರು ಶಿಕ್ಷಣ ಪಡೆಯುತ್ತಾರೋ ಆಗ ಅವರು ಇಂಜಿನಿಯರ್, ಡಾಕ್ಟರ್, ಆಫೀಸರ್, ಕಾರಕೂನ್ ಹೀಗೆ ವಿವಿಧ ಸ್ತರದ ವ್ಯಕ್ತಿಗಳಾಗಿ ರೂಪುಗೊಳ್ಳುತ್ತಾರೆ.
ಮಗುವಿಗೆ ಶಿಕ್ಷಕರು ಶಿಕ್ಷಣ ಯಾವ ರೀತಿ ನೀಡಬೇಕೆಂದರೆ, ಶಿಕ್ಷಣ ಪಡೆದಂತಹ ಮಗು ಹೂವು ಅರಳಿದ ಹಾಗೆ ಅರಳಬೇಕು. ಒಂದು ಸುಂದರವಾದ ಹೂವನ್ನು ಕಂಡರೆ, ಪ್ರತಿಯೊಬ್ಬರಿಗೂ ಸಂತೋಷವಾಗುತ್ತದೆ. ಮನಸ್ಸು ಪ್ರಫುಲ್ಲಿತವಾಗುತ್ತದೆ. ಹಾಗೆಯೇ ಶಿಕ್ಷಣ ಪಡೆದ ಮಗು, ನಾಲ್ಕು ಜನರ ಮನಸ್ಸಿಗೆ ತಂಪೆನ್ನೆರೆದು ಶ್ರೇಷ್ಠ ವ್ಯಕ್ತಿತ್ವವನ್ನು ಪಡೆದು ದೊಡ್ಡವನಾಗಬೇಕೆ ಹೊರತು ಸಮಾಜಕ್ಕೆ ಹಾಗೂ ದೇಶಕ್ಕೆ ಕಂಟಕಪ್ರಾಯನಾಗಿ ರೂಪಗೊಳ್ಳಬಾರದು. ಶಿಕ್ಷಕನು ತನ್ನ ಜವಾಬ್ದಾರಿಯನ್ನರಿತು ಕಾರ್ಯ ನಿರ್ವಹಿಸಬೇಕು. ದೇಶದ ಅಧ್ಯಕ್ಷನಾದ ವ್ಯಕ್ತಿಯೂ ಒಮ್ಮೆ ಶಿಕ್ಷಕನ ಕೈ ಕೆಳಗೆ ಕುಳಿತು ಕಲಿತಿರುತ್ತಾನೆ. ದೇಶವನ್ನೆ ಧ್ವಂಸ ಮಾಡುವ ಭಯೋತ್ಪಾದಕನೂ ಒಬ್ಬ ಶಿಕ್ಷಕನ ಕೈ ಕೆಳಗೆ ಕಲಿತು ಹೋಗಿರುತ್ತಾನೆ. ಆದರೆ, ಇಬ್ಬರಲ್ಲೂ ಎಷ್ಟೊಂದು ವಿಭಿನ್ನತೆ!? ವ್ಯಕ್ತಿಯೊಬ್ಬನನ್ನು ನಿರ್ಮಾಣ ಮಾಡುವಲ್ಲಿ ಸಮಾಜದ ಪಾತ್ರವು ಬಹುಮುಖ್ಯ ಎಂದು ನಾವು ಗಮನಿಸಬೇಕು. ಮೊದ ಮೊದಲು ಮಗು ಶಾಲೆಯಲ್ಲಿ ಕುಳಿತು ಶಿಕ್ಷಕರು ಹೇಳುವ ಪಾಠ, ನೀತಿಮಾತುಗಳನ್ನು ಆಸಕ್ತಿಯಿಂದ ಕುತೂಹಲದಿಂದ ಕೇಳುತ್ತದೆ. ಆದರೆ, ಯಾವಾಗ ಸಮಾಜದಲ್ಲಿ ಜನರ ನಡೆ-ನುಡಿ, ಜೀವನಶೈಲಿ, ಸಂಸ್ಕೃತಿ, ಕೀಳುಮಟ್ಟದ ಭಾಷಾಶೈಲಿ, ಕಲುಷಿತ ವಾತಾವರಣ, ಕೌಟುಂಬಿಕ ಸಂಬಂಧಗಳಲ್ಲಿ ಏರುಪೇರು ಕಂಡುಬರುತ್ತದೆಯೋ ಆಗ ಮಗು ಚಿಂತಿಸಲಾರಂಭಿಸುತ್ತದೆ. ಶಾಲೆಯಲ್ಲಿ ಶಿಕ್ಷಕರು ಹೇಳಿದ ನೀತಿ ಪಾಠ ಹಾಗೂ ಸಮಾಜದಲ್ಲಿ ಕಂಡು ಬಂದ ತದ್ವಿರುದ್ಧ ವಾತಾವರಣದಿಂದಾಗಿ ಮಗು ಯಾವುದು ಸರಿ ಯಾವುದು ತಪ್ಪು ಎಂಬ ದ್ವಂದಕ್ಕೆ ಸಿಲುಕಿಕೊಳ್ಳುತ್ತದೆ. ಮಗು ಹೆಚ್ಚು ಕಾಲ ಸಮಾಜದಲ್ಲೇ ಬೆಳೆಯುವದರಿಂದ ಸಮಾಜದಿಂದ ಅನೇಕ ಪಾಠಗಳನ್ನು ಕಲಿಯುತ್ತಾ ಹೋಗುತ್ತದೆ. ಶಿಕ್ಷಕರು ಹೇಳುವದನ್ನೆಲ್ಲ ಸುಳ್ಳು ಎಂದು ಭಾವಿಸಿಬಿಡುತ್ತದೆ. ಪರಿಣಾಮವಾಗಿ ಪಾಠದಲ್ಲಿ ಆಸಕ್ತಿ ಕಳೆದುಕೊಂಡು ಬಿಡುತ್ತದೆ. ಶಾಲೆಯನ್ನು ತಪ್ಪಿಸುವದಕ್ಕೆ ಪ್ರಾರಂಭಿಸುತ್ತದೆ. ಪಾಲಕರು ಮತ್ತು ಸಮಾಜವು ಶಿಕ್ಷಕರನ್ನು ವಿನಾಕಾರಣ ನಿಂದಿಸಿದಾಗ ತಾನು ಕೂಡ ನಿಂದಿಸಲಾರಂಭಿಸುತ್ತದೆ. ಶಿಕ್ಷಕರಿಗೆ, ಹಿರಿಯರಿಗೆ ಗೌರವ ತೋರುವದನ್ನು ಕಲಿಯುವದಿಲ್ಲ. ಸಮಾಜದ ವಿರುದ್ಧ ಅಹಿತಕರ ಚಟುವಟಿಕೆಗಳನ್ನು ನಡೆಸಲಾರಂಭಿಸುತ್ತದೆ. ತತ್ಪರಿಣಾಮವಾಗಿ `ಬಾಲಾಪರಾಧಿ ಕಾರಾಗೃಹ'ಕ್ಕೆ ಸೇರ್ಪಡೆಗೊಳ್ಳುತ್ತದೆ...! ಇಂತಹ ಮಕ್ಕಳನ್ನು ಶತಾಯಗತಾಯ ತಿದ್ದಲು ಪ್ರಯತ್ನಿಸುವದು ಶಿಕ್ಷಕರ ಬಹು ಜವಾಬ್ದಾರಿಯುತ ಆದ್ಯ ಕರ್ತವ್ಯವೂ ಹೌದು!
ಕೆಲವು ಶಿಕ್ಷಕರಲ್ಲಿ ದೋಷಗಳಿರುತ್ತವೆ. ಮಕ್ಕಳಲ್ಲಿ ಬೇಧ-ಭಾವ ಮಾಡುವದು, ವಿನಾಕಾರಣ ದಂಡಿಸುವದು, ಶಾಲೆಬಿಟ್ಟ ಮಕ್ಕಳಿಗೆ ದಂಡ ವಿಧಿಸಿ ಬಂದ ಹಣದಿಂದ ವೈಯುಕ್ತಿಕ ಕೆಲಸಗಳಿಗೆ ಬಳಸುವದು, ಮಕ್ಕಳನ್ನು ಮನೆಗೆಲಸಕ್ಕೆ ಹಚ್ಚುವದು, ಲೈಂಗಿಕ ಶೋಷಣೆ ನೀಡುವದು, ಮಕ್ಕಳನ್ನು ಹೀನಾಯಮಾನವಾಗಿ ಅವಮಾನಿಸುವದು, ಅದರಲ್ಲೂ ಹೆಣ್ಣು ಮಕ್ಕಳಿಗೆ ಅಶ್ಲೀಲ ಪದಗಳಿಂದ ನಿಂದಿಸುವದು. ಹಿರಿಯವ್ಯಕ್ತಿಗಳನ್ನು ಮಹಾತ್ಮರನ್ನು ಏಕವಚನದಲ್ಲಿ ಕೇವಲವಾಗಿ ಬಾಯಿಗೆ ಬಂದಂತೆ ನಿಂದಿಸುವದು, ಮಾತಾನಾಡುವದೌ. ಪಾಠ ಬೋಧನೆಯಲ್ಲಿ ಆಸಕ್ತಿ ತೋರದೆ ಇರುವದು, ರೌಡಿಯಂತೆ ವರ್ತಿಸುವದು, ಸಹಶಿಕ್ಷಕಿಯರ ಮೇಲೆ ಕಾಮುಕ ಕಣ್ಣು ಬೀರುವದು, ತನ್ನ ಬಗ್ಗೆ ತಾನೇ ಕೆಟ್ಟದಾಗಿ ಬಯ್ದುಕೊಳ್ಳುವದು, ಅಹಂಭಾವದಿಂದ ವರ್ತಿಸುವದು, ಉಡುಗೆ-ತೊಡುಗೆಯಲ್ಲಿ ಸರಳತೆ ಇಲ್ಲದಿರುವದು, ಮಕ್ಕಳೆದುರಿಗೆ ದುಷ್ಟಚಟಗಳಲ್ಲಿ ತೊಡಗುವದು (ಉದಾ: ಸ್ಮೋಕಿಂಗ್, ಡ್ರಿಂಕಿಂಗ್), ಇತ್ಯಾದಿಗಳೆಲ್ಲ ಶಿಕ್ಷಕರ ವಿರುದ್ಧ ಕಂಡುಬರುವ ದೋಷಾರೋಪಣೆಗಳು ಇವರು ಎಂದು ಶಿಕ್ಷಕ ಸ್ಥಾನಕ್ಕೆ ಅರ್ಹರಲ್ಲ. ಇಂಥವರನ್ನು ಶಿಕ್ಷಕರೆಂದು ಕರೆಯಲಾಗುವದಿಲ್ಲ. ಚಂದ್ರನ ಮೇಲೆ ಕಪ್ಪುಚುಕ್ಕೆ ಇಟ್ಟ ಹಾಗೆ ಇವರು ಶಿಕ್ಷಕ ಕುಲಕ್ಕೆ ಕಪ್ಪು ಚುಕ್ಕೆಗಳಿದ್ದ ಹಾಗೆ. ಇಂತಹವರ ವಿರುದ್ಧ ಪ್ರತಿಯೊಬ್ಬ ವಿದ್ಯಾರ್ಥಿ/ನಿ ಹಾಗೂ ಸಮಾಜ ಸಿಡಿದೇಳಬೇಕು. ಇಂತಹ ಶಿಕ್ಷಕರೇ ದೇಶವಿದೇಶಗಳನ್ನು ನಾಶಮಾಡಬಲ್ಲ ಹಿಟ್ಲರ್‌ನಂತಹವರನ್ನು ರೂಪಿಸುವವರು!
ಶಾಲೆಯೆಂಬುದು ದೇವಾಲಯ ಇದ್ದ ಹಾಗೆ. ಮಕ್ಕಳು ಇಲ್ಲಿ ಕಲಿತರೆ ಸರಸ್ವತಿಯನ್ನು ಆರಾಧಿಸಿದ ಹಾಗೆ. ಈ ದೇವಾಲಯದಲ್ಲಿ ಜಾತಿ-ಮತ, ಬಡವ-ಶ್ರೀಮಂತ ಎಂಬ ಬೇಧ ಭಾವ ಇಲ್ಲ. ಸ್ವಾರ್ಥ, ಲಿಂಗಪ್ರಜ್ಞೆ ಇಲ್ಲಿ ಇಲ್ಲ. ಶಾಲೆಯ ಕೋಣೆಗಳು ನೋಡಲಿಕ್ಕೆ ಸಾಧಾ ಇರುತ್ತವೆ. ಆದರೆ ಇಲ್ಲಿ ಜ್ಞಾನ(ವಿದ್ಯೆ) ಎಂಬ ಅಮೃತ ಸಿಗುತ್ತದೆ. ಶಿಕ್ಷಕ ಮಕ್ಕಳಿಗೆ ಜ್ಞಾನ ಎಂಬ ಅಮೃತ ಕುಡಿಸಬೇಕು. ಜಗತ್ತಿನಲ್ಲಿ ಜ್ಞಾನಕ್ಕೆ ಬಹಳ ಮಹತ್ವವಿದೆ. ಜನರು ಬುದ್ಧ, ಮಹಾವೀರ್‍ಅ, ಗಾಂಧೀಜಿ, ಡಾ||ಬಿ.ಆರ್.ಅಂಬೇಡ್ಕರ್‌ರಂತಹವರನ್ನು ನೆನೆಯುತ್ತಾರೆಯೇ ಹೊರತು ಕೋಟಿ ಕೋಟಿ ಗಳಿಸಿದ ಕೋಟ್ಯಾಧಿಪತಿಗಳನ್ನಲ್ಲ. ಈ ಕೋಟ್ಯಾಧಿಪತಿಗಳು ಕಾಲಗತಿಯಲ್ಲಿ ನಶಿಸಿ ಹೋಗುತ್ತಾರೆ. ಆದರೆ, ಜ್ಞಾನಿಗಳು ಅಜರಾಮರವಾಗಿ ಉಳಿಯುತ್ತಾರೆ. ಜೀವನದಲ್ಲಿ ಏನನ್ನೂ ಗಳಿಸದೇ ಇದ್ದರೂ ಜ್ಞಾನವನ್ನಾದರೂ ಗಳಿಸಲೇಬೇಕು. ಜ್ಞಾನ ಎಲ್ಲಿ ಇರುತ್ತದೆಯೋ ಅಲ್ಲಿ ಸಂಪತ್ತು ಇರುತ್ತದೆ. ಸಂಪತ್ತಿಗಾಗಿ ಪರದಾಡಬೇಕಿಲ್ಲ. ಜ್ಞಾನಕ್ಕಾಗಿ ಪರದಾಡಬೇಕು. ಆಯುಷ್ಯ ಪೂರ್ತಿ ಜ್ಞಾನ ಸಂಪಾದನೆ ಮಾಡಿದರೂ ಜ್ಞಾನದ ಸಾಗರವನ್ನು ಪೂರ್ತಿಯಾಗಿ ಕುಡಿಯಲಾಗುವದಿಲ್ಲ. ಆದರೆ, ಸಾಗರದ ಒಂದು ಹನಿ ನೀರನ್ನಾದರೂ ಹಿಡಿದಿಟ್ಟುಕೊಳ್ಳುವ ಪ್ರಯತ್ನ ಮಾಡಲೇಬೇಕು ತಾನೇ? ಆದರೆ, ಪ್ರಾಪಂಚಿಕ ಐಹಿಕ ಸುಖಗಳನ್ನು ತ್ಯಜಿಸಬಾರದು.
ಶಿಕ್ಷಕ ತನ್ನ ವೃತ್ತಿಯನ್ನು ಪ್ರೀತಿಸಬೇಕು. ತನ್ನನ್ನು ತಾನು `ಶಿಕ್ಷಕ' ಎಂದು ತಿಳಿದುಕೊಳ್ಳಬೇಕೆ ವಿನಃ `ನೌಕರ' ಎಂದು ಭಾವಿಸಬಾರದು. ಹಾಗೊಂದು ವೇಳೆ ಭಾವಿಸಿದರೆ ಅವನಿಂದ ಏನನ್ನೂ ಸಾಧಿಸಲಾಗುವದಿಲ್ಲ. ಒಬ್ಬ ಆದರ್ಶ ಶಿಕ್ಷಕ ಎನಿಸಿಕೊಳ್ಳಲಾಗುವದಿಲ್ಲ. ಶಿಕ್ಷಕ ತನ್ನ ವೃತ್ತಿಯ ಬಗ್ಗೆ ಹೆಮ್ಮೆಪಡಬೇಕೆ ಹೊರತು ಅತೃಪ್ತಿಪಟ್ಟುಕೊಳ್ಳಬಾರದು. ಏಕೆಂದರೆ, ದೇಶದ ರಾಷ್ಟ್ರಪತಿ, ಪ್ರಾಧಾನಿಯಾದಿಯಾಗಿ ಸಣ್ಣ ಕಾರಕೂನವರೆಗೂ ಎಲ್ಲರೂ ಈತನಿಗೆ ತಲೆಬಾಗಿಸುತ್ತಾರೆ. ಶಿಕ್ಷಕನ ಮಹತ್ವವೇ ಅಂತಹದ್ದು.
ಶಿಕ್ಷಕನ ಸಂಬಳ ಕಡಿಮೆಯಿರಬಹುದು. ಮಧ್ಯಮ ವರ್ಗದ ಜೀವನ ನಡೆಸುತ್ತಿರಬಹುದು. ಆದರೆ, ಆತನ ವೃತ್ತಿ ಶ್ರೀಮಂತವಾಗಿದೆ. ಅವನಿಗೆ ಇರಲಿಕ್ಕೆ ಮನೆ ಇಲ್ಲದಿರಬಹುದು. ಶಾಲೆಯೆಂಬ ದೇವಾಲಯವಿದೆ.
ಕೆಲವಂ ಬಲ್ಲವರಿಂದ ಕಲಿತು
ಕೆಲವಂ ಶಾಸ್ತ್ರಗಳಿಂದ ಕೇಳುತಂ
ಕೆಲವಂ ಮಾಳ್ಪವರಿಂದ ಕಂಡು,
ಕೆಲವಂ ಸುಜ್ಞಾನದಿಂದ ನೋಡುತಂ
ಕೆಲವಂ ಸಜ್ಜನ ಸಂಗದಿಂದರಿಯಲ್
ಸರ್ವಜ್ಞವಪ್ಪಂತೆ ಕೇಳ್
ಫಲವಂ ಪೊಳ್ಳ ಸಮುದ್ರವೈ ಹರಹರ
ಶ್ರೀ ಚನ್ನ ಸೋಮೇಶ್ವರ
ಎಲ್ಲರೂ ಕಲಿಯುತ್ತಾರೆ ಆದರೆ ಎಲ್ಲರೂ ಶಿಕ್ಷಣವಂತರು ಅಲ್ಲ. ಒಬ್ವ ವ್ಯಕ್ತಿ ಶಿಕ್ಷಣವಂತ ಅಂತ ಕರೆಸಿಕೊಳ್ಳಬೇಕಾದರೆ ಈ ಮೇಲಿನ ಫಾಲ್ಕುರಿಕೆ ಸೋಮನಾಥನ ವಚನದಂತೆ ಕೇಳಿ ಕಲಿಯಬೇಕು, ಮಾಡಿ ಕಲಿಯಬೇಕು, ನೋಡಿ ಕಲಿಯಬೇಕು, ಆಲೋಚಿಸಿ ಕಲಿಯಬೇಕು ಆ ಬಳಿಕ ಸಜ್ಜನರ ಸಂಗದಿಂದ ಒಂದಷ್ಟು ಕಲಿಯಬೇಕು - ಇವೇ ಆ ಐದು ಕಲಿಕೆಗಳು. ಇಂತಹವರನ್ನು ಮಾತ್ರ ಶಿಕ್ಷಣವಂತರು ಎನ್ನಬಹುದು. `ವಿದ್ಯೆಯುಳ್ಳವನ ಮುಖವು ಮುದ್ದು ಬರುವಂತಿಕ್ಕು, ವಿದ್ಯೆಯಿಲ್ಲದವನ ಮುಖವು ಹಾಳೂರು ಹದಿನಂತಿಕ್ಕು" ಎನ್ನುವಂತೆ ವಿದ್ಯೆ ಪಡೆದವನನ್ನು ನೋಡಿದೊಡನೆ ಗೌರವ, ಪ್ರೀತಿಯ ಭಾವನೆ ಹುಟ್ಟುತ್ತದೆ. ಏಕೆಂದರೆ, ವಿದ್ಯೆ (ಜ್ಞಾನ) ಆತನಿಗೆ ವಿನಯ, ಸಚ್ಚಾರಿತ್ರ್ಯ, ಉನ್ನತ ನಡೆ-ನುಡಿ, ವಿಚಾರಶೀಲತೆಯನ್ನು ಕಲಿಸಿರುತ್ತದೆ. ಇಂತಹವರನ್ನು ಶಿಕ್ಷಣವಂತ ವ್ಯಕ್ತಿ ಎನ್ನಲಾಗುತ್ತದೆ. ಪದವಿ, ಮಾರ್ಕ್ಸು, ಮೆಡೆಲ್ ತೆಗೆದುಕೊಂಡ ಮಾತ್ರಕ್ಕೆ ಸಾಕ್ಷರರೆಲ್ಲಾ ಶಿಕ್ಷಣವಂತರಾಗುವದಿಲ್ಲ.
ಶಿಕ್ಷಕ ವಿದ್ಯಾರ್ಥಿಗಳನ್ನು ತನ್ನ ಸ್ವಂತ ಮಕ್ಕಳಂತೆ ಭಾವಿಸಿ ಕಲಿಸಬೇಕು. ಅನುಭವದಿಂದ ಕಲಿಸಬೇಕು, ನೋಟ (ಗಮನ)ದಿಂದ ಕಲಿಸಬೇಕು ಹಾಗೂ ತನ್ನ ವರ್ತನೆಗಳಿಂದ ಕಲಿಸಬೇಕು. ಹೀಗೆ ಕಲಿಸುವದರಿಂದಲೇ ಆತನನ್ನು `ಗುರು' ಎನ್ನಲಾಗುತ್ತದೆ. ಗುರು ಭಗವಂತನಿಗಿಂತಲೂ ಮಿಗಿಲು ಎಂಬುದನ್ನು ಕವಿ ಕಬೀರದಾಸರು ಬಹಳ ಸುಂದರವಾದ ಪದಗಳಿಂದ ಈ ಕೆಳಗಿನಂತೆ ಬಣ್ಣಿಸಿದ್ದಾರೆ.
`ಗುರು ಗೋವಿಂದ ದೋವು ಖಡೆ
ಕಾಕಿ ಲಾಗೂ ಪಾಯ್|
ಬಲಿಹಾರಿ ಗುರು ಆಪನೆ
ಗೋವಿಂದ ದಿಯೋ ಬತಾಯ್| ಎಂದು ಗುರುವಿನ ಮಹತ್ವವನ್ನು ಸಾರಿ ಹೇಳಿದ್ದಾರೆ. ಅದೇ ರೀತಿ, ಇನ್ನೊಂದು ಕಥೆ ಇದೆ - ಕ್ರಿ.ಪೂ. ಸುಮಾರು ೨,೫೦೦ ವರ್ಷಗಳ ಹಿಂದೆ ಅಲೆಗ್ಸಾಂಡರ್ ಎಂಬ ಚಕ್ರವರ್ತಿ ಜಗತ್ತನ್ನು ಆಳಿ ಹೋದ. ಆತ ಅದೆಷ್ಟು ಧೀರ, ಸಾಹಸಿ ಎಂದರೆ, ಅಪಾರ ಸೈನ್ಯವನ್ನು ಹೊಂದಿ, ಮಹಾದಂಡಯಾತ್ರೆ ಕೈಗೊಂಡು ಜಗತ್ತಿನ ಆಗಿನ ಪ್ರಚಲಿತ ದೇಶಗಳನ್ನೆಲ್ಲ ಗೆದ್ದಿದ್ದ. ಎಂದಿಗೂ ಯಾರಿಗೂ ತಲೆಬಾಗದ ಅಲೆಗ್ಸಾಂಡರ್ ಒಂದು ದಿನ ತನ್ನ ಅಪಾರ ಸೈನ್ಯದೊಂದಿಗೆ ಕಾಡಿನಲ್ಲಿ ಬರುತ್ತಿರುವಾಗ ಒಬ್ಬ ವೃದ್ಧ ಎದುರಿಗೆ ಬಂದ. ತಕ್ಷಣವೇ ಅಲೆಗ್ಸಾಂಡರ್ ತನ್ನ ಹ್ಯಾಟ್ ಕೆಳಗಿಟ್ಟು ವೃದ್ಧನಿಗೆ ತಲೆಬಾಗಿ ನಮಸ್ಕರಿಸಿದ. ಆತನ ಸೇನಾಧಿಪತಿ ಸೈನಿಕರಿಗೆಲ್ಲ ಪರಮಾಶ್ಚರ್ಯ. ಇಡೀ ಜಗತ್ತನ್ನೇ ಗೆದ್ದು ಯಾರಿಗೂ ತಲೆಬಾಗದೆ ಇರುವ ಅಲೆಗ್ಸಾಂಡರ್‌ನಿಗೆ, "ಈ ಸಾಮಾನ್ಯ ವೃದ್ಧನಿಗೆ ತಲೆಬಾಗಿಸಲು ಕಾರಣವೇನೆಂದು" ಕೇಳಲಾಗಿ ಆತ ಹೇಳಿದ " " ಈತ ಬೇರೆ ಯಾರೂ ಅಲ್ಲ; ನನಗೆ ವಿದ್ಯೆ ಕಲಿಸಿದ `ಗುರು' ಇದ್ದಾನೆ. ಆದ್ದರಿಂದ ನಾನು ತಲೆ ಬಾಗಿಸಿದ್ದೀನಿ" ಎಂದು ಹೇಳಿದ. ಹೀಗೆ ಗುರುವಿನ ಮಹತ್ವವನ್ನು ಆತ ಇಡೀ ಜಗತ್ತಿಗೆ ಸಾರಿದ.
ಲೇಖನ ಬರೆದವರು : ಗುರುಪ್ರಸಾದ್ ಎಸ್. ಹತ್ತಿಗೌಡರ
ಸಹ - ಶಿಕ್ಷಕರು
ಕಮಲಾದೇವಿ ಪಾಟೀಲ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢ ಶಾಲೆ ಬಿಜಾಪುರ

Subscribe to:
Comments (Atom)