ಇತ್ತೀಚೆಗಷ್ಟೆ ನಮ್ಮ ಶಾಲೆಯಲ್ಲಿ ೬೬ನೇ ಸ್ವಾತಂತ್ರ್ಯೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ.ಎನ್. ಬಿರಾದಾರ ಅವರು ಹಾಗೂ ಅತಿಥಿಗಳಾಗಿ ಶ್ರೀ ಸುರೇಶ ಗೆಜ್ಜಿ (ಉಪನ್ಯಾಸಕರು, ಚಾಣಕ್ಯ ಕರಿಯರ್ ಅಕಾಡೆಮಿ ಬಿಜಾಪುರ) ಅವರು ವೇದಿಕೆಯನ್ನು ಅಲಂಕರಿಸಿದ್ದರು. ಮುಖ್ಯ ಗುರುಗಳಾದ ಶ್ರೀ ಡಿ.ಎಸ್.ಗಜಾಕೋಶ ಮತ್ತು ಬೆಳಗಿನ ವಿಭಾಗದ ಮುಖ್ಯ ಗುರುಮಾತೆ ಶ್ರೀಮತಿ ಎಸ್.ಎಂ.ಸವಣೂರ ಅವರ ಮಾರ್ಗದರ್ಶನದಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ತನು, ಮನ, ಧನವನ್ನರ್ಪಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಧ್ವಜಾರೋಹಣ ಕಾರ್ಯಕ್ರಮವನ್ನು ಎಂ.ಎನ್.ಬಿರಾದಾರ ಅವರು ನೆರವೇರಿಸಿದರು. ಮುದ್ದು ವಿದ್ಯಾರ್ಥಿಗಳು ಸ್ವಾತಂತ್ರ್ಯ ಹೋರಾಟಗಾರರ ವಿವಿಧ ವೇಷಭೂಷಣಗಳನ್ನು ಧರಿಸಿ ಎಲ್ಲರ ಮನ ಸೆಳೆದರು. ಸ್ವಾತಂತ್ರ್ಯೋತ್ಸವ ನಿಮಿತ್ಯ ಹಮ್ಮಿಕೊಳ್ಳಲಾದ ಪ್ರಬಂಧ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ ಹಾಗೂ ವಿವಿಧ ಆಟೋಟಗಳಲ್ಲಿ ಭಾಗವಹಿಸಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ, ಪಾರಿತೋಷಕಗಳನ್ನು ವಿತರಿಸಲಾಯಿತು. ನಂತರ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು. ಶಾಲೆಯ ಶಿಕ್ಷಕರಾದ ಕುಮಾರ. ಜಿ.ಎಸ್. ಹತ್ತಿಗೌಡರ ಅವರು ನಿರೂಪಿಸಿದರು. ಸಹ ಶಿಕ್ಷಕಿ ಅಮೀನಗಡ ಅವರು ವಂದಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವ ಅತಿಥಿಗಳಾದ ಶ್ರೀ ಸುರೇಶ ಗೆಜ್ಜಿ
ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದ ವಿದ್ಯಾರ್ಥಿಗಳಿಗೆ ಬಹುಮಾನ, ಪಾರಿತೋಷಕಗಳನ್ನು ವಿತರಿಸುತ್ತಿರುವದು.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿ ಕಳೆ ತಂದುಕೊಟ್ಟ ವಿದ್ಯಾರ್ಥಿಗಳು ಹಾಗೂ ಪಾಲಕರು.
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳು ಹಾಗೂ ಚಾಣಕ್ಯ ಕರಿಯರ್ ಅಕಾಡೆಮಿಯ ಸಂಸ್ಥಾಪಕರಾದ ಶ್ರೀ ಎನ್.ಎಂ.ಬಿರಾದಾರ ಗುರುಗಳು.
ದೇಶದ ವಿವಿಧ ರಾಜ್ಯಗಳ ವೇಷಭೂಷಣಗಳನ್ನು ಧರಿಸಿ "ನಾವೆಲ್ಲ ಭಾರತೀಯರು ಒಂದೇ" ಎಂಬ ಐಕ್ಯತೆಯನ್ನು ಸಂದೇಶವನ್ನು ಸಾರಿದ ವಿದ್ಯಾರ್ಥಿನಿಯರು. ಈ ವೇಷಭೂಷಣವನ್ನು ಸಿದ್ಧಪಡಿಸಿದವರು ಸಹ ಶಿಕ್ಷಕಿಯರಾದ ಶ್ರೀಮತಿ ಎಲ್.ವಿ.ಅನಂತಪುರ ಅವರು.
‘ವಂದೇ ಮಾತರಂ’ ಗೀತೆಗೆ ಹೆಜ್ಜೆ ಹಾಕುತ್ತಿರುವ ವಿದ್ಯಾರ್ಥಿಗಳು
By
Kamaladevi Patil school Bijapur